Business Opportunities in Agriculture: 150 Field Interviews (Book)

ಪಡಿತರ ವಿವರ ಮೊಬೈಲ್**ನಲ್ಲಿ/ration & lpg details on mobile

Register

Click Here!

SWAMY1807

New Member
ಪಡಿತರ ವಿವರ ಮೊಬೈಲ್**ನಲ್ಲಿ
ಆನ್*ಲೈನ್*ನಲ್ಲಿ ಗ್ರಾಹಕರಿಗೆ ಪಡಿತರ ವಿವರಗಳನ್ನು ನೀಡುವ ವ್ಯವಸ್ಥೆ ಬರುವ ತಿಂಗಳಿನಿಂದ ಜಾರಿಗೆ ಬರಲಿದೆ.


ಆನ್*ಲೈನ್*ನಲ್ಲಿ ಗ್ರಾಹಕರಿಗೆ ಪಡಿತರ ವಿವರಗಳನ್ನು ನೀಡುವ ವ್ಯವಸ್ಥೆ ಬರುವ ತಿಂಗಳಿನಿಂದ ಜಾರಿಗೆ ಬರಲಿದೆ. ಗ್ರಾಹಕರಿಂದ ಮೊಬೈಲ್* ನಂಬರ್*ಗಳನ್ನು ಸ್ವೀಕರಿಸುವ ಕಾರ್ಯಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗಾಗಲೇ ಚಾಲನೆ ನೀಡಿದೆ.

ಇಲಾಖೆಯಲ್ಲಿ ಇದಕ್ಕೆ ಅವಶ್ಯವಿರುವ ಸಿದ್ಧತೆಗಳು ಪೂರ್ಣಗೊಂಡಿದೆ. ಮೊಬೈಲ್* ದೂರವಾಣಿ ಹೊಂದಿರುವವರು ಫೆ. 25ರೊಳಗೆ ಸಂಖ್ಯೆಗಳನ್ನು ತಮ್ಮ ಪಡಿತರ ಅಂಗಡಿಗಳಿಗೆ ನೀಡುವಂತೆ ಇಲಾಖೆ ಪ್ರಕಟನೆ ಹೊರಡಿಸಿದ್ದು ಮಾರ್ಚ್* ತಿಂಗಳಿನಿಂದ ಹೊಸ ವ್ಯವಸ್ಥೆ ಬಹುತೇಕ ಜಾರಿಗೆ ಬರಲಿದೆ.

ಮೊಬೈಲ್*ನಲ್ಲಿ ಸಂದೇಶ

ಪಡಿತರ ಅಂಗಡಿಯವರು ರಾಜ್ಯ ಆಹಾರ ನಿಗಮದಿಂದ ಅಥವಾ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸೊಸೈಟಿ ಗೋದಾಮುಗಳ ಸಗಟು ಮಳಿಗೆಗಳಿಂದ ಪಡಿತರ ಸಾಮಾಗ್ರಿಗಳಿಗೆ ಬಿಲ್* ಮಾಡಿದ ಕೂಡಲೇ ಈ ಲೆಕ್ಕ ಅಂಗಡಿಯವರ ಖಾತೆಗೆ ವರ್ಗಾವಣೆಯಾಗುತ್ತದೆ. ತಕ್ಷಣ ಬಿಲ್* ಆಗಿರುವ ದಿನಾಂಕ, ಆ ತಿಂಗಳ ಪಡಿತರ ಪ್ರಮಾಣ, ಸಾಮಾಗ್ರಿಗಳ ದರ ಹಾಗೂ ಅವುಗಳನ್ನು ಗ್ರಾಹಕರು ಪಡೆಯಲು ಇರುವ ಕಡೇ ದಿನಾಂಕಗಳ ವಿವರ ಪಡಿತರ ಚೀಟಿದಾರರ ಮೊಬೈಲ್*ಗೆ ಸಂದೇಶದ ಮೂಲಕ ರವಾನೆಯಾಗುತ್ತದೆ. ಇದಕ್ಕಾಗಿ ಈಗಾಗಲೇ ವಿಶೇಷವಾದ ತಂತ್ರಜ್ಞಾನವೊಂದನ್ನು ರೂಪಿಸಲಾಗಿದೆ.

ಇಲಾಖೆಯ ಸೂಚನೆ

ಪಟ್ಟಣ/ನಗರ ಪ್ರದೇಶದಲ್ಲಿ ಪಡಿತರ ಚೀಟಿದಾರರು ವಾಸ ಮಾಡುತ್ತಿರುವ ಮನೆಯ ವಿದ್ಯುತ್* ಮೀಟರ್* ಆರ್*.ಆರ್*. ನಂಬರ್* ಪಡೆದು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮನೆಯ ಆಸ್ತಿ ತೆರಿಗೆ ಸಂಖ್ಯೆಗೆ ಪಡಿತರ ಚೀಟಿಗಳನ್ನು ಹೊಂದಾಣಿಕೆ ಮಾಡಲಾಗಿರುತ್ತದೆ. ಈ ರೀತಿ ಅಂಗೀಕರಿಸಲ್ಪಟ್ಟ ನಗರ/ ಪಟ್ಟಣ ಪ್ರದೇಶದ ಪಡಿತರ ಚೀಟಿದಾರರು ಪ್ರಸ್ತುತ ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಕುಟುಂಬ ಹೊಂದಿರುವ ಮೊಬೈಲ್* ಸಂಖ್ಯೆಯನ್ನು ಹಾಗೂ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರು ತಮ್ಮ ಮನೆಯ ವಿದ್ಯುತ್* ಮೀಟರ್* ಆರ್*. ಆರ್*. ನಂಬರ್* ಹಾಗೂ ಮೊಬೈಲ್* ಸಂಖ್ಯೆಯನ್ನು ಫೆ. 25ರೊಳಗೆ ನೀಡಬೇಕು. ಮೊಬೈಲ್* ಇಲ್ಲದವರಿಗೆ ಇದು ಕಡ್ಡಾಯವಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಹಂತದಲ್ಲಿ ಬಯೊಮೆಟ್ರಿಕ್ಸ್* ವ್ಯವಸ್ಥೆ

ಆನ್*ಲೈನ್* ವ್ಯವಸ್ಥೆಯ ಬಳಿಕ ಬಯೋಮೆಟ್ರಿಕ್ಸ್* ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಈಗಾಗಲೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಚಿಂತನೆ ನಡೆಸಿದೆ. ಪಡಿತರ ಚೀಟಿಗಳಿಗೆ ಭಾವಚಿತ್ರ ತೆಗೆಯುವ ಸಂದರ್ಭದಲ್ಲಿ ಇಲಾಖೆ ಬಯೋಮೆಟ್ರಿಕ್*Å ವಿವರಗಳನ್ನು ಸಂಗ್ರಹಿಟ್ಟಿದೆ. ಪಡಿತರ ವಿತರಕ ಅಂಗಡಿಯಲ್ಲಿ ಬಯೋಮೆಟ್ರಿಕ್ಸ್* ಯಂತ್ರಗಳನ್ನು ಸ್ಥಾಪಿಸಲಾಗುವುದು. ಪಡಿತರ ಚೀಟಿದಾರ ಅಥವಾ ಸದಸ್ಯ ಈ ಮೆಷಿನ್*ನಲ್ಲಿ ತನ್ನ ಬೆರಳನ್ನು ಒತ್ತಿದಾಗ ಸ್ವಯಂವಾಗಿ ಅಲ್ಲಿ ವಿವರ ದಾಖಲಾಗುತ್ತದೆ. ಒಂದು ವೇಳೆ ಅ ವ್ಯಕ್ತಿ ಸಂಬಂಧಪಡದವರಾಗಿದ್ದಾರೆ ತಿರಸ್ಕೃತಗೊಳ್ಳುತ್ತದೆ ಇಲಾಖಾ ಮೂಲಗಳು ತಿಳಿಸಿವೆ.

ಪ್ರಸ್ತುತ ಹಿಂದೂಸ್ತಾನ್* ಪೆಟ್ರೋಲಿಯಂ ಕಂಪೆನಿಯ ಅಡುಗೆ ಅನಿಲ ಬಳಕೆದಾರರಿಗೆ ಕಂಪೆನಿ ಆನ್*ಲೈನ್* ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಆನ್*ಲೈನ್*ನಲ್ಲಿ ಮರು ಪೂರೈಕೆಗೆ ಬುಕ್ಕಿಂಗ್* ಮಾಡಿದ ಕೂಡಲೇ ಬುಕ್ಕಿಂಗ್* ನಂಬ್ರ ಹಾಗೂ ವಿತರಕ ಸಂಸ್ಥೆಯಲ್ಲಿ ಆ ದಿನಾಂಕದವರೆಗೆ ವಿತರಣೆಯಾದ ವಿವರ ಬರುತ್ತದೆ. ಅಲ್ಲಿ ಕೂಡ ಅಡುಗೆ ಅನಿಲ ವಿತರಕ ಸಂಸ್ಥೆಗಳು ಬಿಲ್* ಮಾಡಿದ ಕೂಡಲೇ ಗ್ರಾಹಕರ ಮೊಬೈಲ್*ಗೆ ಬಿಲ್* ನಂಬ್ರದ ಜತೆಗೆ ಮುಂದಿನ 48 ಗಂಟೆಗಳೊಳಗೆ ವಿತರಣೆಯಾಗುತ್ತದೆ ಎಂಬ ಸಂದೇಶ ರವಾನೆಯಾಗುತ್ತದೆ. ವಿತರಣೆಯಾದ ಕೂಡಲೇ ನಿಮ್ಮ ಅಡುಗೆ ಅನಿಲ ವಿತರಣೆಯಾಗಿದೆ ಎಂಬ ಸಂದೇಶ ಬರುತ್ತದೆ.
Regards,
SWAMY
 

Business Opportunities in Agriculture: 150 Field Interviews (Book)

tmravichandran

New Member
Ration & lpg details on mobils

Hello Swamijiiiiiiii. . . . .

Meeru dheentlo rasinadhe naaku ardham kaledhu. Ration, LPG detailsu mobile lo ela vosthundhe.

Meeru dhayavu chesi English lo kani Tamil lo kani rayandi. Me anthuru thelusukontam.

Meeku dhandam

ippadiki
 
Last edited by a moderator:

Business Opportunities in Agriculture: 150 Field Interviews (Book)

Top