Get daily agriculture business leads on WhatsApp. Join our WhatsApp Channel

1 Day Training on Natural Farming and Village Development 1st April 2018, Sunday. (Kannada)

y2kharzha

Member
*ರೈತ ಮಿತ್ರರೇ ಹಾಗು ಕೃಷಿ ಕುಟುಂಬದವರೇ,*

ನಾವೆಲ್ಲಾ ಆದರ್ಶ ಜೀವಿಗಳು..ಸಮಾಜಮುಖಿ ಕಾರ್ಯಕೈಗೊಳ್ಳುವ ಮನಸ್ಸಿನವರು...ಜ್ಞಾನವಾಗಲಿ, ಆಹಾರವಾಗಲಿ ಹಂಚಿ ತಿನ್ನುವ ಶ್ರಮಜೀವಿಗಳು....ನಮ್ಮ ದೇಶದ ಮಹಾರಾಜರು, ಸ್ವಾತಂತ್ರ್ಯ ಹೋರಾಟಗಾರರು ಹಾಗು ಕೃಷಿ ಕ್ರಾಂತಿಕಾರರ ಬಗ್ಗೆ ಒಮ್ಮೆ ಸ್ಮರಿಸಿದರೆ ಆ ಆದರ್ಶ, ಸೇವಾ ಮನೋಭಾವ, ಸಮಾಜಮುಖಿ ಕೆಲಸ, ನ್ಯಾಯಯುತ ಹೋರಾಟ ಹಾಗು ನಮ್ಮದು ಎನ್ನುವ ಒಗ್ಗಟ್ಟು ನಮ್ಮ ರಕ್ತದಲ್ಲೇ ಬೆರೆತಿದೆ ಎನ್ನುವುದು ತಿಳಿಯುತ್ತದೆ.

*ಆದರೆ ಸೂರ್ಯನಿಗೆ ಕಾರ್ಮೋಡ ಕವಿದಂತೆ, ಭಾರತೀಯರಲ್ಲಿ ರಕ್ತಾನುಗುಣವಾಗಿ ಬಂದ ಈ ಎಲ್ಲಾ ಗುಣಗಳು ಇಂದು ಮರೆಮಾಚಿವೆ, ಅದನ್ನೆಲ್ಲಾ ಮನನ ಮಾಡಿಸೋ ಕೆಲಸ ಮಾಡಿಬೇಕಿದೆ ಅಷ್ಟೇ...*

ಎಲ್ಲಾದರು ಅಪಘಾತವಾದಾಗ, ಹೋಗುತ್ತಿರುವ ಜೀವ - ಹರಿಯುತ್ತಿರುವ ರಕ್ತ ಕಂಡಿ ನಮ್ಮೆಲ್ಲಾ ಕೆಲಸ ಬಿಟ್ಟು, ಜೀವ ಉಳಿಸುವ - ಆಸ್ಪತ್ರೆಗೆ ಸೇರಿಸುವ ಪುಣ್ಯದ ಕಾರ್ಯ ಮಾಡುವ ನಾವು ; ಎಂದಾದರೂ ನಮ್ಮ ಊರಿನದ್ದೇ ರೈತ ಮೋಸ ಹೋಗುತ್ತಿದ್ದರೆ, ಬೆಳೆ ನಾಶಮಾಡಿಕೊಳ್ಳುತಿದ್ದರೆ, ಉತ್ತಮ ಬೆಲೆ ಸಿಗದೇ ಒದ್ದಾಡುತ್ತಿದ್ದರೆ, ನಾವು ಸಹಾಯ ಮಾಡುತ್ತೇವೆಯೇ ?? ಜೀವಕ್ಕೆ- ರಕ್ತಕ್ಕೆ ಬೆಲೆ ಇದೆ ....*ರೈತನ ನೋವಿಗೆ-ಫಸಲಿಗೆ-ಫಲವತ್ತತೆಗೆ ಬೆಲೆ ಇಲ್ಲವೇ ??*....ಬಹುಶಃ ನಮ್ಮ ಕ್ರಾಂತಿವೀರರು ಹಾಗೆ ಯೋಚಿಸಿದ್ದರೆ ನಾವು ಇಂದು ಹೀಗೆ ಇರಲು ಸಾಧ್ಯವಾಗುತ್ತಿತ್ತೇ ??

*ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ....*
*ರೈತನೊಬ್ಬ ಕಲಿತರೆ, ಕಾಡೊಂದು ಸಿದ್ಧವಾದಂತೆ...*
*ಕಾಡು ಸಿದ್ಧವಾದರೆ, ಭೂಮಿ ಫಲವತ್ತಾದಂತೆ...*
*ಭೂಮಿ ಫಲವತ್ತಾದರೆ, ನಾಡು ಸಮೃದ್ಧವಾದಂತೆ...*

ಸ್ನೇಹಿತರೆ ನಿಮ್ಮ ಆದರ್ಶ, ಸೇವಾ ಗುಣ, ಸಮಾಜಮುಖಿ ತುಡಿತಗಳಿಗೆ ಬಣ್ಣ ಹಚ್ಚುವ ಸಮಯ ಬಂದಿದೆ....ನಿಮ್ಮ ಆಸೆಗಳಿಗೆ ವೇದಿಕೆ ಸಿದ್ಧವಾಗಿದೆ.. ರೈತಾಭಿವೃದ್ಧಿ ಕೆಲಸಗಳನ್ನು, ಕೃಷಿಯ ಆಧುನಿಕತೆಯನ್ನು, ಕಡಿಮೆ ಖರ್ಚಿನ ಕೃಷಿ ವಿಧಾನಗಳನ್ನು, ಕೃಷಿ ಮಾರುಕಟ್ಟೆಯ ವಿಚಾರಗಳನ್ನು, ದೈನಂದಿಕ ಕೃಷಿ ಉತ್ಪನ್ನಗಳ ವಹಿವಾಟಿನ ದರಗಳನ್ನು, ಇನ್ನಿತರ ಕೃಷಿ ಮಾದರಿಗಳನ್ನು, *ನಿಮ್ಮದೇ ಊರಲ್ಲಿ, ನಿಮ್ಮದೇ ಜಾಗದಲ್ಲಿ, ನಿಮ್ಮದೇ ಮನೆಯಿಂದ, ನಿಮ್ಮ ಕೆಲಸಗಳ ಜೊತೆಗೆ, ನಿಮ್ಮ ಊರಿನ ರೈತರಿಗೆ, ಯುವಕರಿಗೆ ತಿಳಿಸುವ, ಮಾಹಿತಿ ಹಂಚುವ, ಕೃಷಿ ಜ್ಞಾನ ಹೆಚ್ಚಿಸುವ ಬೃಹತ್ಕಾರ್ಯದಲ್ಲಿ ಪಾಲ್ಗೊಳ್ಳಬಹುದು.*

*MHR foundation of India ಸಂಸ್ಥೆಯು ಈ ಕೆಲಸಗಳನ್ನು ಈಗಾಗಲೇ ಪ್ರಾರಂಭಿಸಿದ್ದು, ತುಮಕೂರು ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನ ಹೋಬಳಿ ಗ್ರಾಮಕ್ಕೆ ಒಬ್ಬರಂತೆ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.* ಈ ಅಧಿಕಾರಿಗಳು ರೈತಾಭಿವೃದ್ಧಿ ಕೆಲಸಗಳನ್ನು, ಕೃಷಿಯ ಆಧುನಿಕತೆಯನ್ನು, ಕಡಿಮೆ ಖರ್ಚಿನ ಕೃಷಿ ವಿಧಾನಗಳನ್ನು, ಕೃಷಿ ಮಾರುಕಟ್ಟೆಯ ವಿಚಾರಗಳನ್ನು, ದೈನಂದಿಕ ಕೃಷಿ ಉತ್ಪನ್ನಗಳ ವಹಿವಾಟಿನ ದರಗಳನ್ನು, ಇನ್ನಿತರ ಕೃಷಿ ಮಾದರಿಗಳನ್ನು ತಮ್ಮದೇ ಹೋಬಳಿ/ಗ್ರಾಮದಲ್ಲಿ ತಿಳಿಸುವ ಕೆಲಸ ಮಾಡಬೇಕಿದೆ.

*ನೀವು ಸಹ ತುಮಕೂರಿನ ಜಿಲ್ಲೆಯವರೇ ?? ನಿಮಗೂ ಈ ಕಾರ್ಯಗಳಲ್ಲಿ ಭಾಗಿಯಾಗುವ ಉತ್ಸಾಹವಿದೆಯೇ ?? ಹಾಗಿದ್ದಲ್ಲಿ ತಡವಿನ್ಯಾಕೆ ?? ಈಗಲೇ ತಿಳಿಸಿರುವ ಅರ್ಹತೆ ವಿಚಾರಗಳನ್ನು ಓದಿ, ನೀವು ಅರ್ಹರೆಂದೆನಿಸಿದರೆ ಅಧಿಕಾರಿಯಾಗಲು ಅರ್ಜಿ ಸಲ್ಲಿಸಿ.*

ಅರ್ಹತೆ:
1)* 21 ವರ್ಷ ಮೇಲ್ಪಟ್ಟವರಾಗಿರಬೇಕು.*
2) ಪುರುಷ, ಮಹಿಳೆ, ಅಂಗವಿಕಲರು ಸಹ ಭಾಗಿಯಾಗಬಹುದು.
3) ಹಳ್ಳಿಯಲ್ಲೇ ವಾಸವಿರಬೇಕು, ಪಟ್ಟಣವಾಸಿಗರಿಗೆ ಆದ್ಯತೆ ಕಡಿಮೆ.
4) ಕನಿಷ್ಠ *3* ವರ್ಷಗಳಿಂದ ಕೃಷಿಕರಾಗಿರಬೇಕು.
5) *ವಾಸವಿರುವ ಹಳ್ಳಿ ತುಮಕೂರು ಜಿಲ್ಲೆಗೆ ಸೇರಿರಬೇಕು.*
6) ಕನ್ನಡ ಮತ್ತು ಇಂಗ್ಲಿಷ್ ಭಾಷೆಯು ಮಾತನಾಡುವುದಕ್ಕೆ, ಬರೆಯುವುದಕ್ಕೆ ತಿಳಿದಿರಬೇಕು.
7) *ವಿದ್ಯಾರ್ಹತೆ: SSLC ಅಥವಾ ಮೇಲ್ಪಟ್ಟು.*
8) ಮೊಬೈಲ್ ಉಪಯೋಗಿಸಲು ತಿಳಿದಿರಬೇಕು.

*ಆಸಕ್ತಕರು,MHR Foundation of India ಸಂಸ್ಥೆಯ ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ 1-4-2018,ಭಾನುವಾರದಂದು ನಡೆಯುವ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೆಲಸದ ಬಗ್ಗೆ ಮತ್ತು ಕೃಷಿಯ ಬಗ್ಗೆ ತಿಳಿದುಕೊಳ್ಳಬಹುದು.

ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.*

https://goo.gl/forms/Dm37dkTqZPUWJJrn2

ಹೆಚ್ಚಿನ ವಿವರಗಳಿಗೆ * 8884175609 * ದೂರವಾಣಿಗೆ ಸಂಪರ್ಕಿಸಿ..
 

Back
Top